ಉದ್ಯೋಗ ಮಿತ್ರ ಅಭಿಯಾನ 3ನೇ ಆವೃತ್ತಿ - ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ
'ಸಂಸದ್ ಉದ್ಯೋಗ ಮಿತ್ರ' 3ನೇ ಆವೃತ್ತಿಯಲ್ಲಿ ಇಂದು ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ಸಹಯೋಗದಲ್ಲಿ , 216 ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಲಾಗಿದ್ದು, 6 ಕಂಪನಿಗಳು 100ಕ್ಕೂ ಅಧಿಕ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಆಗಿರುತ್ತಾರೆ. 15 ಅಭ್ಯರ್ಥಿಗಳು ಇಂದಿನ ಜಾಬ್ ಮೇಳದಲ್ಲಿಯೇ ಉದ್ಯೋಗ ಪಡೆದಿರುತ್ತಾರೆ.

ಡಿಸೆಂಬರ್ ತಿಂಗಳಿನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮೇಳ ಆಯೋಜನೆಗೊಳಿಸಲು ಯೋಜಿಸಿದ್ದು, ಇಂದಿನ ಉದ್ಯೋಗ ಮೇಳದ ಯಶಸ್ಸಿಗೆ ಸಹಕಾರ ನೀಡಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆ ಹಾಗೂ ಇತರ 6 ಕಂಪನಿಗಳ ಆಡಳಿತ ಮಂಡಳಿಗೆ ಧನ್ಯವಾದಗಳು.
ಇನ್ನು ಈ ಕುರಿತು ಈ ಹಿಂದಿನ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಂಸದರು, ಇಂದಿನ ಕಾಲಮಾನದಲ್ಲಿ ಉದ್ಯೋಗ ಎಂಬುದು ಬಹುಮುಖ್ಯವಾಗಿದೆ. ವ್ಯಕ್ತಿ ಒಬ್ಬನ ದೃಷ್ಟಿಯಿಂದ ಅಲ್ಲದೇ ಇಡೀ ಕುಟುಂಬದ ದೃಷ್ಟಿಯಿಂದ ಉದ್ಯೋಗ ಬಹು ಅಗತ್ಯ. ಈ ಹಿನ್ನಲೆ ನೂರಾರು ಆಕಾಂಕ್ಷಿಗಳು ಕೆಲಸಕ್ಕಾಗಿ ಹುಡುಕಾಡುತ್ತಾರೆ. ಬಿಪಿಓ, ಎನ್ಜಿಒ ಸೇರಿದಂತೆ ಹಲವು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅಲೆಡಾಡುತ್ತಾರೆ. ಅಂತಹವರಿಗೆ ಈ ಮೂಲಕ ನೆರವಾಗುವ ಪ್ರಯತ್ನ ನಡೆಸಲಾಗಿದೆ. ಈ ಮೂಲಕ ಯುವಕರು ತಮ್ಮ ಕನಸಿನ ಉದ್ಯೋಗ ಪಡೆಯಲು ನೆರವಾಗುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಪ್ರೋತ್ಸಾಹದ ಕೆಲಸ ನಮ್ಮಿಂದ ಆಗಲಿದೆ ಎಂದಿದ್ದಾರೆ.