ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ ಪ್ರಭಾ 7s

250 ಟೀಮ್ ಗಳ ಭಾಗವಹಿಸುವಿಕೆಯ ಅತಿ ದೊಡ್ಡ ಕ್ರೀಡಾ ಉತ್ಸವಕ್ಕೆ ತೆರೆ.

ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ  ಪ್ರಭಾ 7s
ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ  ಪ್ರಭಾ 7s
ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ  ಪ್ರಭಾ 7s
ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ  ಪ್ರಭಾ 7s
ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜೇತರಾಗಿ ಹೊರಹೊಮ್ಮಿದ  ಪ್ರಭಾ 7s

ಬೆಂಗಳೂರು. ಡಿಸೆಂಬರ್ 27.

ಜೀವನ್ ಬ್ಲೂಸ್ ಎಫ್ ಸಿ ತಂಡವನ್ನು  4-2 ಪೆನಾಲ್ಟಿ (2-2 ಡ್ರಾ ನಂತರ)ಯೊಂದಿಗೆ ಸೋಲಿಸುವ ಮೂಲಕ ಪ್ರಭಾ 7s ತಂಡವು ಕಿಕ್ ಸ್ಟಾರ್ಟ್  ಎಫ್ ಸಿ ಯಲ್ಲಿ ನಡೆದ 'ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್' ನ ವಿಜಯೀ ತಂಡವಾಗಿ ಹೊರಹೊಮ್ಮಿದ್ದು, 8 ಟರ್ಫ್ ಗಳಲ್ಲಿ ಒಟ್ಟು 244 ಪಂದ್ಯಗಳು ನಡೆದಿದ್ದು (ಇದರಲ್ಲಿ 31  ವೃತ್ತಿಪರ ತಂಡಗಳು ಭಾಗವಹಿಸುವ ಮೂಲಕ) ಬೆಂಗಳೂರು ದಕ್ಷಿಣದ ಅತಿ ದೊಡ್ಡ ಕ್ರೀಡಾ ಉತ್ಸವಕ್ಕೆ ಇಂದು ತೆರೆ ಎಳೆಯಲಾಗಿದ್ದು, ಕೇವಲ ಮೂರೇ ದಿನಗಳಲ್ಲಿ 150ಕ್ಕೂ ಅಧಿಕ ಸ್ವಯಂಸೇವಕರ ನೆರವಿನಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಟೂರ್ನಮೆಂಟ್‌ ಯಶಸ್ವಿಯಾಗಿರುವುದು ಹೆಗ್ಗಳಿಕೆ. ಓಪನ್ ಕೆಟಗರಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲಾ ಮಾಸಿಯಾ ತಂಡವು,ಕಾಸ್ಮೋಸ್ ತಂಡದ ಎದುರಿನ ರೋಚಕ ಪಂದ್ಯದಲ್ಲಿ ಸೆಣಸಿ ವಿಜಯಿಯಾಗಿದ್ದು ಪಂದ್ಯದ ವಿಶೇಷ.

ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ, " ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿನ ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಟೂರ್ನಿಯನ್ನು ಆಯೋಜಿಸಲಾಗಿದ್ದು, ವೃತ್ತಿಪರ ಹಾಗೂ ಹವ್ಯಾಸಿ ಫುಟ್ಬಾಲ್ ಆಟಗಾರರನ್ನು  ಪ್ರೋತ್ಸಾಹಿಸುವುದು ಈ ಟೂರ್ನಿಯ ಉದ್ದೇಶ ವಾಗಿತ್ತು, ಆದರೆ, ಪಂದ್ಯ ಆಯೋಜನೆಯ ಘೋಷಣೆಯಾದ ನಂತರ ಬೆಂಗಳೂರು ದಕ್ಷಿಣದ ಅನೇಕರು ಟೂರ್ನಿಯ ಭಾಗವಾಗಲು ಇಚ್ಛಿಸಿದ್ದು ನಿಜಕ್ಕೂ ಖುಷಿಯ ಸಂಗತಿ. ತಂಡದ ಆಟಗಾರರು, ಪ್ರತೀ ಟರ್ಫ್ ನಲ್ಲಿ ನಿಯೋಜನೆಗೊಂಡಿದ್ದ ಸ್ವಯಂಸೇವಕರು, ಟರ್ಫ್ ನ ಮಾಲೀಕರು ಇವರೆಲ್ಲರ ಸಹಕಾರದಿಂದ ಈ ಟೂರ್ನಿ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಗಿದೆ" ಎಂದು ತಿಳಿಸಿದರು.

 ಬೆಂಗಳೂರಿನ 9 ಟರ್ಫ್ ಗಳ ಸಹಯೋಗದೊಂದಿಗೆ  ಟೂರ್ನಿಯನ್ನು ಆಯೋಜನೆಗೊಳಿಸಿರುವ ಬೆಂಗಳೂರು ದಕ್ಷಿಣ ಸಂಸದರ ಕಛೇರಿಯು , ವೃತ್ತಿಪರ ತಂಡಗಳ ಪಂದ್ಯವನ್ನು ಕಿಕ್ ಸ್ಟಾರ್ಟ್ ಎಫ್ ಸಿ ಯಲ್ಲಿ ನಡೆಸಲಾಯಿತು.

ಸಂಸದರ ಕಛೇರಿಯು, 9 ವಿವಿಧ ಫುಟ್ಬಾಲ್ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಯೋಜನೆಗೊಳಿಸಿದ್ದು, ಕಿಕ್ ಸ್ಟಾರ್ಟ್ ಎಫ್ ಸಿ (ಜೆಪಿ ನಗರ), ಫಿಟ್ ಆನ್ ಸ್ಪೋರ್ಟ್ಸ್ (ಗೊಟ್ಟಿಗೆರೆ), ಸ್ಪೋರ್ಟ್ಸ್ ರಶ್ (ಜಯನಗರ), ರಶ್ ಅರೇನಾ (ರಾಜಾಜಿನಗರ), ಟೈಗರ್ 5 ಬನಶಂಕರಿ, ಡ್ರಿಬಲ್ ಅರೇನಾ (ಉತ್ತರಹಳ್ಳಿ)
, ಗೋಲ್ಡನ್ ಲೆಗ್ (ಎಚ್ ಎಸ್ ಆರ್ ಲೇ ಔಟ್) ,ಟರ್ಫ್ ಪಾರ್ಕ್ (ಕೋರಮಂಗಲ)  & ಟರ್ಫ್ ಪಾರ್ಕ್, ಎಚ್ ಎಸ್ ಆರ್ ಲೇ ಔಟ್ ಗಳಲ್ಲಿ 16 ವರ್ಷದ ಮೇಲ್ಪಟ್ಟವರಿಗೆ  ಮುಕ್ತ ಪಂದ್ಯಾವಳಿ ನಡೆಸಿದ್ದು, ಮಹಿಳಾ ತಂಡಗಳೂ ಇದರಲ್ಲಿ ಭಾಗವಹಿಸಿದ್ದು, ಜೆಯುಎಫ್ ಸಿ ತಂಡವು ಸಾಯಿ ಸ್ಪೋರ್ಟ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

"ಫುಟ್ಬಾಲ್ ಕುರಿತಾದ ಕ್ರೇಜ್ ಗೆ ಬೆಂಗಳೂರು ಹೊರತಲ್ಲ. ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ಹಲವು ಸಂಘಗಳು, ಯುವ ತಂಡಗಳೊಂದಿಗೆ ಮಧ್ಯ ವಯಸ್ಕ ನಾಗರಿಕರು ಸಹ ಫುಟ್ಬಾಲ್ ಟೂರ್ನಿಯ ಭಾಗವಾಗಿದ್ದು ವಿಶೇಷ.

ನಂತರ ಮಾತನಾಡಿದ ಟೂರ್ನಮೆಂಟ್ ನ ನಿರ್ದೇಶಕರಾದ ಶ್ರೀ ಅರವಿಂದ್ ಸುಚಿಂದ್ರನ್, "  ಒಂದೇ ದಿನದಲ್ಲಿ 8 ವಿವಿಧ  ಟರ್ಫ್ ಗಳಲ್ಲಿ 192 ಮ್ಯಾಚ್ ನಡೆಸಿದ್ದು ಈ ಟೂರ್ನಮೆಂಟ್ ನ ವಿಶೇಷ. ಫುಟ್ಬಾಲ್ ಸೇರಿದಂತೆ ಇಂತಹ ಇನ್ನಷ್ಟು  ಟೂರ್ನಮೆಂಟ್ ಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸುವ ಉದ್ದೇಶವನ್ನು ಬೆಂಗಳೂರು ದಕ್ಷಿಣ ಸಂಸದರ ಕಛೇರಿಯು ಇಟ್ಟುಕೊಂಡಿದ್ದು, ಇದೇ ರೀತಿಯ ಸಹಕಾರದ ನಿರೀಕ್ಷೆ ಇದೆ " ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಷಿಯೇಷನ್ ನಿಂದ ಮಾನ್ಯತೆ ಪಡೆದ ರೆಫರೀ ಗಳು ಪಂದ್ಯವನ್ನು ಅಚ್ಚುಕಟ್ಟಿನಿಂದ ನಡೆಸಿದ್ದು, ಬೆಂಗಳೂರು ಹೊರತುಪಡಿಸಿ  ನೀಲಗಿರೀಸ್, ಕೊಯಮತ್ತೂರು, ಮೈಸೂರು, ಮಂಡ್ಯ, ಚನ್ನಪಟ್ಟಣ ದ ವೃತ್ತಿಪರ ಫುಟ್ಬಾಲ್ ತಂಡಗಳನ್ನು ಸಹ ಆಹ್ವಾನಿಸಲಾಗಿತ್ತು. ಪಂದ್ಯದ ಒಟ್ಟು ಬಹುಮಾನಗಳ ಮೊತ್ತ 3.5 ಲಕ್ಷ, ವೈಯುಕ್ತಿಕವಾಗಿ ಉತ್ತಮ ಪರ್ಫಾರ್ಮನ್ಸ್ ತೋರಿರುವ ಆಟಗಾರರಿಗೂ ಕೂಡ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಫಿಟ್ ಆನ್ ಸ್ಪೋರ್ಟ್ಸ್  ಟರ್ಫ್ ನ ಮಾಲೀಕರಾದ ಶ್ರೀ ಅಭಿಷೇಕ್ ಮಾತನಾಡಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವೇಶ ಶುಲ್ಕವಿಲ್ಲದೇ ಟೂರ್ನಿ ನಡೆಸುವುದು ಸಣ್ಣ ಮಾತಲ್ಲ. ಇದಕ್ಕೂ ಮೊದಲು ನಾವು ಎಷ್ಟೋ ಪಂದ್ಯಗಳನ್ನು ಆಯೋಜಿಸಿದ್ದೇವೆ.ಆದರೆ, ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣಲು ಸ್ವಯಂಸೇವಕರು, ಪ್ರಾಯೋಜಕರ ಹಾಗೂ ಎಲ್ಲ ಟರ್ಫ್ ಮಾಲೀಕರ ಸಹಕಾರವೇ ಕಾರಣ" ಎಂದು ವಿವರಿಸಿದರು.

ಈ ಟೂರ್ನಮೆಂಟ್ ನ ಮುಖ್ಯ ಪ್ರಾಯೋಜಕರಾದ  ರಾಜ್ ಸನ್ಸ್ ಫಾರ್ಮಸ್ಯುಟಿಕಲ್ಸ್ ಮತ್ತು ಸಪ್ನಾ ಫಾರ್ಮಸ್ಯುಟಿಕಲ್ಸ್ .

ಪ್ಲಾಟಿನಂ ಸ್ಪಾನ್ಸರ್ಸ್ : ಫಾಸ್ಟ್ &ಅಪ್.

ಗೋಲ್ಡ್ ಸ್ಪಾನ್ಸರ್ಸ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಉಲ್ಲಾಸ್ ಅಗರಬತ್ತಿ.

ಸಹ ಪ್ರಾಯೋಜಕರು : ಪ್ಯೂರ್ ಓ ನ್ಯಾಚುರಲ್, ಗೋಚೆ & ಹೌಸ್ ಆಫ್ ಸ್ಟೋರಿ, ಹೇಯ್ ಡಾಕ್,ಸ್ಟೋನ್ಡ್ ಮಂಕಿ, ಪಾಪ್ಜ್ ಕಿಚನ್, ಡೈಮಂಡ್ ಮಂತ್ರ ಮತ್ತು ಅಖಾಡ ಯೋಗ, ಎಲ್ಲ ಸಂಸ್ಥೆಗಳಿಗೂ, ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಬೆಂಗಳೂರು ದಕ್ಷಿಣ ಸಂಸದರ ಕಛೇರಿಯ ವತಿಯಿಂದ ಧನ್ಯವಾದಗಳು.