ಬೆಂಗಳೂರು ನಗರ ಕೋವಿಡ್-19 ಲಸಿಕಾ ವಿತರಣೆಯ ಕಾರ್ಯತಂತ್ರದ ಸಭೆ

ಬೆಂಗಳೂರು ನಗರ ಕೋವಿಡ್-19 ಲಸಿಕಾ ವಿತರಣೆಯ ಕಾರ್ಯತಂತ್ರದ ಸಭೆ

ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕೋವಿಡ್-19 ಲಸಿಕಾ ವಿತರಣೆಯ ಕಾರ್ಯತಂತ್ರದ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು. 

ಮೊದಲ ಹಂತದಲ್ಲಿ ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಲಯದ 26,452 ಆರೋಗ್ಯ ಸೇವಾ ಕಾರ್ಯಕರ್ತರು 2 ಡೋಸ್ ಲಸಿಕೆ ಪಡೆಯಲಿದ್ದು, 2 ಹಾಗೂ 3ನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿಗಳು (50 ವರ್ಷ ಮೇಲ್ಪಟ್ಟವರು , ಅನಾರೋಗ್ಯ ಪೀಡಿತರಿಗೆ ಆದ್ಯತೆ) ಪಡೆಯಲಿದ್ದಾರೆ.

ಪ್ರತೀ 100 ಜನರಿಗೆ ಒಬ್ಬರಂತೆ ನುರಿತ ಲಸಿಕಾ ತಜ್ಞರನ್ನು ಮೀಸಲಿಡುವಂತೆ ಹಾಗೂ ಹೆಚ್ಚಿನ ಪ್ರಮಾಣದ ತಜ್ಞರನ್ನು ಈ ಕಾರ್ಯಕ್ಕೆ ಲಭ್ಯರಿರಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಎಲ್ಲ ಲಸಿಕಾ ಕೇಂದ್ರಗಳನ್ನು ಅಚ್ಚುಕಟ್ಟಾಗಿ ಇಡುವ ಮೂಲಕ ಸ್ವಚ್ಛತೆಗೆ ಗಮನ ಕೊಡಲು ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಚೋಳನ್ (ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್), ಡಾ.ವಿಜೇಂದ್ರ (ಸಿ.ಹೆಚ್.ಓ) ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

We reviewed Bengaluru's vaccination strategy and preparedness in a meeting with health officials today.

In Phase One, 26,452 Healthcare workers from South Zone and 7,126 workers from Bommanahalli Zone will be provided with two dosages of the vaccine.

The government has planned to inoculate frontline workers and armed forces in Phase Two and thirdly for priority groups (anyone above 50 or anyone with Co-morbidities). We directed officials to plan an extensive outreach programme so that even the most distressed sector is vaccinated.

We also directed officials to ensure there is at least one trained vaccinator per 100 persons and instructed them to train an additional set of vaccinators for the immunization programme.

We also requested the BBMP to ensure all vaccination sites ie our Primary Health Centres (PHC) are tidy and hygienic. Shri Rajendra Cholan (Smart City MD), Dr Vijendra (CHO) and other officials were present.